ವಿವಾದದ ಸುಳಿಯಲ್ಲಿ “ಆದಿಪುರುಷ್”

ವಿವಾದದ ಸುಳಿಯಲ್ಲಿ "ಆದಿಪುರುಷ್"

ಪ್ಯಾನ್ ಇಂಡಿಯಾ ಸ್ಟಾರ್ ಬಾಹುಬಲಿ ಖ್ಯಾತಿಯ ಪ್ರಭಾಸ್ ನಾಯಕ ಪಾತ್ರದಲ್ಲಿ ಮಿಂಚಿರುವ ಸೈಫ್ ಅಲೀ ಖಾನ್ ಖಳನಾಯಕನಾಗಿ ಅಭಿನಯಿಸಿರುವ ‘ಆಧಿಪುರುಷ’ ಎಂಬ ಹಿಂದಿ ಸಿನಿಮಾ ಟೀಸರ್ ಬಿಡುಗಡೆಗೊಂಡ ಬೆನ್ನಿಗೆ ವಿವಾದದ ಸುಳಿ ಸುತ್ತಿಕೊಂಡಿದೆ. ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರಿಸುಂತಹ ಸೀನ್ ಗಳನ್ನು ಹೊಂದಲಾಗಿದೆ ಎಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಆಧಿಪುರುಷ ಸಿನಿಮಾವೂ ರಾಮಾಯಣ ಮಹಾಕಾವ್ಯವನ್ನು ಆಧರಿಸಿ ಭಾರತೀಯ ಹಿಂದೂ ಪೌರಾಣಿಕ ಚಿತ್ರವಾಗಿದೆ. ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಟಿ-ಸೀರೀಸ್ ಫಿಲ್ಮ್ಸ್ ಮತ್ತು ರೆಟ್ರೋಫಿಲ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಿಸಲಾಗಿದೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ಈ ಚಿತ್ರದಲ್ಲಿ ಪ್ರಭಾಸ್ ರಾಘವನಾಗಿ, ಕೃತಿ ಸನೋನ್ ಜಾನಕಿಯಾಗಿ ಮತ್ತು ಸೈಫ್ ಅಲಿ ಖಾನ್ ಲಂಕೇಶ್ ಆಗಿ ನಟಿಸಿದ್ದಾರೆ.

7,000 ವರ್ಷಗಳ ಹಿಂದೆ, ಅಯೋಧ್ಯೆಯ ರಾಜ ರಾಘವ ಲಂಕಾದ ರಾಜನಾದ ಲಂಕೇಶನಿಂದ ಅಪಹರಣಕ್ಕೊಳಗಾದ ತನ್ನ ಹೆಂಡತಿ ಜಾನಕಿಯನ್ನು ರಕ್ಷಿಸಲು ಹನುಮಂತನ ಸೈನ್ಯದ ಸಹಾಯದೊಂದಿಗೆ ಲಂಕಾ ದ್ವೀಪಕ್ಕೆ ಪ್ರಯಾಣಿಸುವ ಘಟನೆಯ ಕಥೆಯಾಗಿದೆ ಈ ಚಿತ್ರ. ಸುಮಾರು ₹500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ ಎನ್ನಲಾಗುತ್ತದೆ.

ರಾಮ, ಲಕ್ಷ್ಮಣ, ಹನುಮಂತ ಮತ್ತು ರಾವಣನ ಪಾತ್ರಗಳು ನೆಟ್ಟಿಗರ ಕೋಪಕ್ಕೆ ಗುರಿಯಾಗಿದೆ. ರಾಮ ಪುರಾಣದಲ್ಲಿ ವಿವರಿಸಿದಂತೆ ಕಾಣುವುದಿಲ್ಲ. ಹನುಮಂತನಿಗೆ ಚರ್ಮದ ವೇಷ ನೀಡಲಾಗಿದೆ. ರಾವಣನನ್ನು ಇಸ್ಲಾಮೀಕರಿಸಲಾಗಿದೆ. ಅಲ್ಲಾಹುದ್ದೀನ್ ಖಿಲ್ಜಿಯಂತೆ ಹೋಳುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದೂರಿದ್ದಾರೆ. ಹಿಂದೂ ಸಮಾಜವನ್ನು ಅಪಹಾಸ್ಯ ಮಾಡಿದೆಯೆಂದು ವಿಶ್ವ ಹಿಂದೂ ಪರಿಷತ್ ನ (ವಿಎಚ್ ಪಿ) ಸಂಭಾಲ್ ಘಟಕದ ಪ್ರಚಾರ ಪ್ರಮುಖ್ ಅಜಯ್ ಶರ್ಮ ‘ಥಿಯೇಟರ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದುವರೆ ನಿಮಿಷದ(1.46) ಟೀಸರ್ ಬಿಡುಗಡೆಗೊಂಡ ಕೆಲವೇ ಸಮಯದಲ್ಲಿ #BoycottAdipurush #Ban Adipurush ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದವು. ಇದೀಗ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಮಧ್ಯಪ್ರದೇಶದ ಗ್ರಹಸಚಿವ ನರೋತ್ತಮ್ ಮಿಶ್ರ ಮುಂತಾದವರು ಆದಿಪುರುಷ ಸಿನಿಮಾದ ವಿರುದ್ದ ಹೇಳಿಕೆಗಳನ್ನು ಕೊಟ್ಟಿದ್ದಾರೆ. 2023 ಜನವರಿ 12 ರಂದು ಪಂಚ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಗೊಳ್ಳಲಿದೆ

Related posts

ಭಾರತೀಯ ಅಂಚೆ ಇಲಾಖೆ – ಪೊಲೀಸ್‌ ಇಲಾಖೆ ಒಡಂಬಡಿಕೆ

Shamsheer Budoli

ಒರು ತೆಕ್ಕನ್ ತಳ್ಳು ಕೇಸ್” ಬಿಜು ಮೇನೋನ್ ನ ಸಾಹಸ ಪ್ರದರ್ಶನ

ಶಾರುಖ್ ಖಾನ್ ರವರ ಬಹು ನಿರೀಕ್ಷಿತ ‘ಪಠಾನ್’ ಚಿತ್ರದ ಟೀಸರ್ ಬಿಡುಗಡೆ : ಅಭಿಮಾನಿಗಳಲ್ಲಿ ಸಂಭ್ರಮ

Leave a Comment