‘ಸೇ ನೋ ಟು ಡ್ರಗ್ಸ್’ ಮಾದಕ ವಿರೋಧಿ ಅಭಿಯಾನ. “ನಶಾ ಮುಕ್ತ ರ‍್ನಾಟಕ“

‘ಸೇ ನೋ ಟು ಡ್ರಗ್ಸ್’ ಮಾದಕ ವಿರೋಧಿ ಅಭಿಯಾನ. “ನಶಾ ಮುಕ್ತ ರ‍್ನಾಟಕ“

ಯುವ ಪೀಳಿಗೆ ದಿನೇ ದಿನೇ ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದು ಅದರಲ್ಲೂ ವಿದ್ಯಾರ್ಥಿಗಳು ಈ ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಹಾಗೂ ಇದನ್ನು ಬಳಸಿಕೊಂಡ ಮಾದಕ ದ್ರವ್ಯ ಸಾಗಾಣಿದಾರರು ಕಳ್ಳಸಾಗಣೆ ಮಾಡಿ ದೇಶದ ಯುವಶಕ್ತಿಗೆ ಮಾರಕವಾಗುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿರುತ್ತದೆ.

ರಾಜ್ಯ ಗೃಹ ಇಲಾಖೆಗಳ ಅಂಕಿಅAಶಗಳ ಪ್ರಕಾರ ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 16 ಡ್ರಗ್ ಪ್ರಕರಣಗಳು ಕಂಡುಬರುತ್ತಿದ್ದು, ಅದರಲ್ಲಿ ಮಾದಕ ವಸ್ತುಗಳ ಸೇವನೆ, ಸ್ವಾಧೀನ ಮತ್ತು ವ್ಯವಹರಗಳ ಪ್ರಕರಣಗಳು ದಾಖಲಾಗುತ್ತಿದೆ. ದೇಶದ ವಿವಿಧ ನಗರಗಳ 16 ರಿಂದ 20 ವರ್ಷದ ಸಾವಿರ ಯುವಕರಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಶೇ. 47 ಜನರು ಸಿಗರೇಟು ಸೇವಿಸುವುದಾಗಿದ್ದು, ಶೇ. 20 ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆ. ಅದರಲ್ಲಿ ಶೇ 83 ಯುವಕರಿಗೆ ಈ ಚಟದಿಂದ ಹೇಗೆ ಹೊರಬರಬೇಕೆಂದು ತಿಳಿದಿಲ್ಲ. ಇದು ಇಂದಿನ ಯುವಕರು

ಅನುಭವಿಸುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದ್ದು, ಸಾಮಾಜಿಕ ಪಿಡುಗುಗಾಗಿ ಪರಿಣಮಿಸಿದೆ. ಈ ಮಾದಕ ವಸ್ತುವಿನ ಜಾಲವು ರಾಜಾರೋಷವಾಗಿ ನಮ್ಮ ಮಧ್ಯೆ ವ್ಯಾಪಿಸಿರುವುದು ದುರಂತವಾಗಿದೆ.
ಸರಕಾರ, ಸಂಘ ಸಂಸ್ಥೆಗಳು, ಸಾರ್ವಜನಿಕರು ಒಂದಾಗಿ ಇದರ ವಿರುದ್ಧ ಸಮರ ಸಾರಬೇಕು. ವಿದ್ಯಾವಂತ ಸಮೂಹವೇ ಅತಿ ಹೆಚ್ಚು ಮಾದಕ ವ್ಯಸನಿಗಳಾಗುತ್ತಿರುವುದು ಕಳವಳಕಾರಿ. ಇಂತಹ ಪ್ರಕರಣಗಳು ಒಂದು ಪ್ರದೇಶಕ್ಕೆ ಸೀಮಿತವಾಗಿರದೆ ಅನೇಕ ಕಡೆಗಳಲ್ಲಿ ಹರಡಿದೆ. ಯುವಕರು ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ.

ಈ ಹಿನ್ನಲೆಯಲ್ಲಿ ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಕರ್ನಾಟಕ ರಾಜ್ಯವು ಅಕ್ಟೋಬರ್ 10 ರಿಂದ ನವೆಂಬರ್ 10 ರ ತನಕ ‘ಸೇ ನೋ ಟು ಡ್ರಗ್ಸ್’ ಮಾದಕ ವಿರೋಧಿ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಪ್ರಯುಕ್ತ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯಾದ್ಯಾಂತ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ, ಶಾಲಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ, ಸಾಮಾಜಿಕ ಜಾಲಾತಾಣದ ಮೂಲಕ ಜಾಗೃತಿ, ಸಂಘ ಸಂಸ್ಥೆಗಳ ಸಹಕಾರಗಳೊಂದಿಗೆ ಈ ಕುರಿತು ಸಂವಾದ, ಜಾಗೃತಿ ಜಾಥ, ಪೋಷಕರಿಗೆ ಕಾರ್ಯಗಾರ, ಶಿಕ್ಷಕರ ಕಾರ್ಯಗಾರ, ವಿದ್ಯಾರ್ಥಿಗಳಿಗೆ ಉಪನ್ಯಾಸ, ಭಿತ್ತಿ ಪತ್ರ ವಿತರಣೆ ಇಂತಹ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಂಡು, ಸಂಪೂರ್ಣ ಸಹಕಾರ ನೀಡ ಬೇಕೆಂದು ಈ ಮೂಲಕ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರೆ ನೀಡುತ್ತದೆ.

ಸಾಲಿಡಾರಿಟಿ ಇದೇ ಡಿಸೆಂಬರ್ 18ರಂದು “ಭರವಸೆ-ಮರುನಿರ್ಮಾಣ-ಘನತೆ” ಎಂಬ ಧ್ಯೇಯವಾಕ್ಯದಡಿ ರಾಜ್ಯಮಟ್ಟದ ಯುವ ಸಮಾವೇಶವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ವಿವಿಧ ಸಾಮಾಜಿಕ, ಸಾಂಸ್ಕçತಿಕ ಕಾರ್ಯಕ್ರಮಗಳು ನಾಡಿನಾದ್ಯಂತ ನಡೆಯಲಿದೆ.

ಉಪಸ್ಥಿತರು:

  1. ಲಬೀದ್ ಶಾಫಿ, ಅಧ್ಯಕ್ಷರು, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ
  2. ಮೊಹಮ್ಮದ್ ರೆಹಾನ್, ಪ್ರಧಾನ ಕಾರ್ಯದರ್ಶಿ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ
  3. ಮೊಹಮ್ಮದ್ ಅಖಿಲ್, ಅಭಿಯಾನ ಸಂಚಾಲಕರು
  4. ಇಮ್ತಿಯಾಝ್ ಬೇಗ್, ಸಂಚಾಲಕರು ಸಾಲಿಡಾರಿಟಿ ಸ್ಪೋರ್ಟ್ಸ್ ಆಂಡ್ ಫಿಟ್‌ನೆಸ್ ಅಕೆಡೆಮಿ
  5. ಮುಹಮ್ಮದ್ ನವಾಝ್, ಮಾಧ್ಯಮ ಉಸ್ತುವಾರಿ

Related posts

‘ಫ್ಲೋರಾ-ಗಾರ್ಡನರ್ಸ್ ಫೇರ್’ ಪ್ರದರ್ಶನ

Shamsheer Budoli

ಶಾರದಾ ಮಾತೆಗೆ ಕಟೀಲು ದುರ್ಗಾಪರಮೇಶ್ವರಿ ದೇವಿಯ ಅಲಂಕಾರ

Shamsheer Budoli

ಸೆಮಿ ಫೈನಲ್ನಲ್ಲಿ ಸೋತ ಭಾರತ, ಫೈನಲ್ ಗೆ ಇಂಗ್ಲೆಂಡ್ ಲಗ್ಗೆ

Ravitheja Chigalikatte

Leave a Comment